Monday, June 27, 2016

ಆತ್ಮೀಯರೇ,
ಬರುವ ಜುಲೈ 1ರಂದು ಬಾಗಲಕೋಟದ ವಿದ್ಯಾಗಿರಿಯ ಸೀತಾರಾಮ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 11 ಗಂಟೆಗೆ ಜರುಗಲಿರುವ ರಾಜ್ಯಮಟ್ಟದ ಪತ್ರಿಕಾ ದಿನಾಚರಣೆಯ ಸಂದರ್ಭದಲ್ಲಿ ಉತ್ತರ ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ಇಪ್ಪತ್ತಕ್ಕೂ ಕಲಾವಿದರಿಂದ ವ್ಯಂಗ್ಯಚಿತ್ರಗಳ ಪ್ರದರ್ಶನ ಜರುಗಲಿದೆ.
ಹಿಂದಿನ ಮಾಧ್ಯಮ ಅಕಾಡೆಮಿ ಸದಸ್ಯ ಹಾಗೂ ಹಿರಿಯ ಪತ್ರಕರ್ತ ಶ್ರೀರಾಮ ಮನಗೂಳಿ, ಈಗಿನ ಸದಸ್ಯ ಶ್ರೀ ಮುತ್ತಣ್ಣ ನಾಯ್ಕರ, ಜಿಲ್ಲಾ ಕಾನಿಪ ಅಧ್ಯಕ್ಷ ಶ್ರೀ ಮಹೇಶ ಅಂಗಡಿ ಅವರ ಸಹಕಾರವನ್ನು ಪಡೆದುಕೊಂಡು, ಸಂಘದ ಅಧ್ಯಕ್ಷನಾದ ನಾನು ಮತ್ತು ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ ಬಜಂತ್ರಿ ಗೌರವಾಧ್ಯಕ್ಷ ಶ್ರೀ ಅಶೋಕ ಜೋಶಿ ಸೇರಿದಂತೆ ಮತ್ತೆಲ್ಲ ಪದಾಧಿಕಾರಿಗಳು ಈ ಪ್ರದರ್ಶನವನ್ನು ಹಮ್ಮಿಕೊಂಡಿದ್ದೇವೆ.
ಪತ್ರಿಕಾ ದಿನಾಚರಣೆಯಂದು ರಾಜ್ಯದ ಎಲ್ಲ ಸ್ಥಳಗಳಿಂದ ಪತ್ರಕರ್ತರು ಆಗಮಿಸುತ್ತಿದ್ದು, ನೀವೂ ಕೂಡ ಇದರಲ್ಲಿ ಪಾಲ್ಗೊಳ್ಳುತ್ತೀರೆಂಬ ನಂಬಿಕೆ ನಮ್ಮೆಲ್ಲರ ಮೇಲಿದೆ.
ನಿಮ್ಮವರು
ಉತ್ತರ ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘ, ಬಾಗಲಕೋಟ (9480114488)

No comments:

Post a Comment